'ಸರ್ಕಾರ, ವಿರೋಧ ಪಕ್ಷದ ಎಲ್ಲಾ ಸಲಹೆಗಳನ್ನೂ ಪ್ರಾಮಾಣಿಕವಾಗಿ ಪರಿಶೀಲಿಸಲಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಿರುವ ಹಿನ್ನೆಲೆಯಲ್ಲಿ, ಸರ್ಕಾರಕ್ಕೆ ವಿರೋಧ ಪಕ್ಷಗಳು ನೀಡುವ ಎಲ್ಲ ರೀತಿಯ ಸಲಹೆಯನ್ನೂ ಸ್ವೀಕರಿಸುವುದಾಗಿ ಅವರು ಹೇಳಿದ್ದಾರೆ.
2019 ರ ಲೋಕಸಭೆ ಚುನಾವಣೆಗೂ ಮುನ್ನ ನಡೆಯುತ್ತಿರುವ ಕೊನೆಯ ಪೂರ್ಣಾವಧಿ ಬಜೆಟ್ ಇದಾಗಿರುವುದರಿಂದ ಕುತೂಹಲ ಹೆಚ್ಚೇ ಇದೆ. ಅಧಿವೇಶನದಲ್ಲಿ ಉದ್ಯೋಗ ಸೃಷ್ಟಿಯ ಕುರಿತು ಚರ್ಚೆ ನಡೆಯಲಿದೆ.
ಜೊತೆಗೆ ಮುಸ್ಲಿಂ ಮಹಿಳೆಯರಿಗೆ (ಮದುವೆ ಹಕ್ಕಿನ ರಕ್ಷಣೆ) ಸಂಬಂಧಿಸಿದ ಮಸೂದೆ, ತ್ರಿವಳಿ ತಲಾಖ್, ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಸೂದೆ ಸೇರಿದಂತೆ ಸುಮಾರು 28 ಮಸೂದೆಗಳು ಲೋಕಸಭೆಯಲ್ಲಿ ಮತ್ತು ಸುಮಾರು 39ಕ್ಕೂ ಹೆಚ್ಚು ಮಸೂದೆಗಳು ರಾಜ್ಯಸಭೆಯಲ್ಲಿ ಚರ್ಚೆಯಾಗಲಿವೆ.
ಬಜೆಟ್ ಆಧಿವೇಶನದ ಕುರಿತು ಕೆಲವು ಪ್ರಮುಖ ಅಂಶಗಳು ಇಲ್ಲಿವೆ.
Budget session has started from today(Jan 29th). Ruling NDA government is ready to face oppositions blame game. Here are some important points on Budget session 2018